Product details
'ಮೊದಲ ಓದು' ಎಲ್ಲರ ಪುಸ್ತಕದ ಅತ್ಯುತ್ತಮ ಪುಸ್ತಕಗಳಲ್ಲೊಂದು. ಎಳೆಯ ವಯಸ್ಸಿನಲ್ಲಿಯೇ ಮಕ್ಕಳಿಗೆ ಪುಸ್ತಕಗಳನ್ನು ಪರಿಚಯಿಸಬೇಕು ಎಂಬ ಉದ್ದೇಶದಿಂದ, ಚಿತ್ರಗಳನ್ನು ನೋಡಲು ಮತ್ತು ಅಕ್ಷರಗಳನ್ನು ಗುರುತಿಸಲು ಈಗಷ್ಟೇ ಆರಂಭಿಸಿರುವ ಪುಟ್ಟ ಮಕ್ಕಳಿಗಾಗಿ ಈ ಪುಸ್ತಕವನ್ನು ರೂಪಿಸಲಾಗಿದೆ. ಮಕ್ಕಳಿಗೆ ತಮ್ಮ ಕುಟುಂಬದ ಸದಸ್ಯರು, ಸಂಬಂಧಿಕರು ಹಾಗೂ ಅವರ ಪರಿಚಿತ ಬದುಕಿಗೆ ಸಂಬಂಧಿಸಿದ ವಸ್ತುಗಳನ್ನು ಗುರುತಿಸುವ ಅವಕಾಶವನ್ನು ಈ ಪುಸ್ತಕ ಒದಗಿಸುತ್ತದೆ. ಚಿತ್ರಗಳನ್ನು ಗಮನಿಸುತ್ತಾ, ಅವುಗಳ ಬಗ್ಗೆ ಯೋಚಿಸುತ್ತಾ ಕಲಿಯುವಂತೆ ಮಾಡುವ ಈ ಪುಸ್ತಕ, ಪುಟ್ಟ ಮಕ್ಕಳಲ್ಲಿ ಓದಿನ ಆಸಕ್ತಿಯನ್ನು ಬೆಳೆಸುತ್ತದೆ. ಮಕ್ಕಳಿಂದ ಅಪಾರ ಮೆಚ್ಚುಗೆ ಗಳಿಸಿರುವ ಆಪ್ತ ಚಿತ್ರ ಪುಸ್ತಕವಿದು.
Similar products