Search for products..

Home / Categories / 6-8 Years /

There's Nothing There! | ಅಲ್ಲಿ ಏನೂ ಇಲ್ಲ!

There's Nothing There! | ಅಲ್ಲಿ ಏನೂ ಇಲ್ಲ!




Product details

ಶಾಲೆಯಿಂದ ಮನೆಯವರೆಗಿನ ಅರಳಿ ಮತ್ತು ಅವಳ ಅಮ್ಮನ ಪ್ರತಿದಿನದ ನಡಿಗೆಯಲ್ಲಿ ಏನೆಲ್ಲಾ ಅಡಗಿದೆ ಗೊತ್ತೇ? ಅವರು ನೋಡುವ ಮತ್ತು ನೋಡದೆಯೇ ಮುಂದೆ ಸಾಗುವ ಎಷ್ಟೋ ಪುಟ್ಟ ಪುಟ್ಟ ವಿಸ್ಮಯಗಳ ಕಥೆ ಈ ಪುಸ್ತಕದಲ್ಲಿದೆ. ಬನ್ನಿ, ಈ ಮೋಜಿನ ಪಯಣದಲ್ಲಿ ನೀವೂ ಪಾಲುದಾರರಾಗಿ! ಪುಸ್ತಕದ ಕೊನೆಯಲ್ಲಿ ನಿಮಗಾಗಿ ಒಂದು ವಿಶೇಷ ಚಟುವಟಿಕೆಯ ಪುಟವೂ ಕಾಯುತ್ತಿದೆ.

ಈ ಪುಸ್ತಕವು ನೇಚರ್ ಕ್ಲಾಸ್ರೂಮ್ಸ್ ಮತ್ತು ದ ಫಿಗ್ ಟ್ರೀ ಲರ್ನಿಂಗ್ ಸೆಂಟರ್ ಸಹಯೋಗದಲ್ಲಿ ನಡೆದ ಎರಡು ವರ್ಷಗಳ 'ಸುತ್ತ ಮುತ್ತ' ಯೋಜನೆಯ ಫಲ. ಇದಕ್ಕೆ ಬೆಂಗಳೂರು ಸಸ್ಟೈನೆಬಿಲಿಟಿ ಫೋರಮ್ ಬೆಂಬಲ ನೀಡಿದೆ. ನೇಚರ್ ಕ್ಲಾಸ್ರೂಮ್ಸ್ ತಂಡ ಹಾಗೂ ದ ಫಿಗ್ ಟ್ರೀ ಲರ್ನಿಂಗ್ ಸೆಂಟರ್‌ನ ಶಿಕ್ಷಣ ತಜ್ಞೆಯರಾದ ಜೇನ್, ಸರೋಜಿನಿ ಮತ್ತು ಗೌಸಿಯಾ ಅವರು ತರಬನಹಳ್ಳಿ ಮತ್ತು ಸಿಲ್ವೇಪುರ ಶಾಲೆಯ ಮಕ್ಕಳೊಂದಿಗೆ ಹಂಚಿಕೊಂಡ ಅನುಭವ ಹಾಗೂ ನೆನಪುಗಳಿಂದ ಈ ಕಥೆ ಮತ್ತು ಪರಿಕಲ್ಪನೆ ರೂಪುಗೊಂಡಿದೆ. ಇದಕ್ಕೆ ಕಲಾತ್ಮಕ ಚಿತ್ರ ಹಾಗೂ ವಿನ್ಯಾಸವನ್ನು ನೀಡಿ ಪುಸ್ತಕವನ್ನು ಅಂದವಾಗಿ ಕಟ್ಟಿಕೊಟ್ಟವರು ಕಾರುಣ್ಯ ಭಾಸ್ಕರ್. ಮೊಗ್ಗು ಪುಸ್ತಕವು ಈ ಕೃತಿಯನ್ನು ಏಕಲವ್ಯ ದೊಂದಿಗೆ ಜತೆಯಾಗಿ ಪ್ರಕಟಿಸಿದೆ.

Do you know what is hidden along Arali and her Amma’s everyday walk from school to home? This book is full of stories about tiny wonders—some that they spot along the way, and some they walk right past without noticing! Come, join in on this fun journey! There is also a special activity page waiting for you at the end of the book.

This book grew out of Sutta Mutta, a two-year project by Nature Classrooms in collaboration with The Fig Tree Learning Center, supported by the Bengaluru Sustainability Forum. The story and concept took shape from the experiences and memories shared with children at Tarabanahalli and Silvepura schools by the Nature Classrooms team and dedicated educators from The Fig Tree Learning Center—Jane, Sarojini, and Gousia. Karunya Bhaskar brought the book to life with artwork and design, and Moggu Pustaka has co-published it with Eklavya.

Similar products


Home

Cart

Account